ಜಿಗ್ಸ್‌ ಮತ್ತು ಫಿಕ್ಸ್ಚರ್ಸ್ಮಿ : ಲ್ಲಿಂಗ್ ಫಿಕ್ಸ್ಚರ್

11 Dec 2019 13:15:00


ಜಿಗ್ಸ್‌ ಮತ್ತು ಫಿಕ್ಸ್ಚರ್ಸ್ ಈ ಲೇಖಮಾಲೆಯಲ್ಲಿ ಈ ಹಿಂದಿನ ಎರಡು ಲೇಖನಗಳಲ್ಲಿ (ಲೋಹಕಾರ್ಯ - ಆಗಸ್ಟ್ ಮತ್ತು ಸಪ್ಟೆಂಬರ್ 2019) ಹಾರಿಝಾಂಟಲ್ ಮತ್ತು ವರ್ಟಿಕಲ್ ಮಿಲಿಂಗ್ ಮಶಿನ್‌ನಲ್ಲಿ ಫಿಕ್ಸ್ಚರ್ ಹೇಗೆ ಕೆಲಸ ಮಾಡುತ್ತದೆ, ಎಂಬುದನ್ನು ನಾವು ತಿಳಿದುಕೊಂಡೆವು. ಈ ಲೇಖನದಲ್ಲಿ ನಾವು ಒಂದು ಬೇರೆಯೇ ವಿಧದ ಯುನಿವ್ಹರ್ಸಲ್ ಮಿಲಿಂಗ್ ಮಶಿನ್‌ನಲ್ಲಿ ಫಿಕ್ಸ್ಚರ್ ಹೇಗೆ ಕೆಲಸ ಮಾಡುತ್ತದೆ, ಎಂಬುದನ್ನು ತಿಳಿಯೋಣ.
 
ಚಿತ್ರ ಕ್ರ. 1 ರಲ್ಲಿ ತೋರಿಸಿರುವ ಕಾರ್ಯವಸ್ತುವನ್ನು ಅಲ್ಯುಮಿನಿಯಮ್ ಲೋಹದಿಂದ ತಯಾರಿಸಲಾಗಿದೆ.
 
 
1_1  H x W: 0 x
 

2_1  H x W: 0 x 
 
ಈ ಕಾರ್ಯವಸ್ತುವಿನ ಭಾರವು ಅಂದಾಜು 10 ಕಿ.ಗ್ರಾಂ. ಇದೆ. ಈ ಕಾರ್ಯವಸ್ತುವಿನ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಚಿತ್ರ ಕ್ರ. 2 ನೋಡಿರಿ.
 
1. ಮೊದಲಾಗಿ 413 ಮಿ.ಮೀ.ನ ವ್ಯಾಸದ ಬೋರಿಂಗ್ ಮಾಡಿದೆವು ಮತ್ತು ಅದರ ಸೆಟಿಂಗ್‌ನಲ್ಲಿ ಫೇಸ್ A ಯ ಯಂತ್ರಣೆಯನ್ನು ಮಾಡಿದೆವು. ಇದರಿಂದಾಗಿ ಬೋರ್ ಮತ್ತು ಫೇಸ್ ಇವೆರಡಕ್ಕೂ ಒಂದರೊಂದಿಗೆ ವ್ಹರ್ಟಿಕಲ್ ಪೊಝಿಶನ್ ಲಭಿಸಿತು. ಅದರಂತೆ ಫೇಸ್ ಅ ಇದರ ಬದಿಯಲ್ಲಿರುವ ಎಲ್ಲ Ø419 ಮಿ.ಮೀ., Ø 36 ಮಿ.ಮೀ., Ø 476 ಮಿ.ಮೀ. ಮತ್ತು ಚ್ಯಾಂಫರ್‌ನ ಯಂತ್ರಣೆಯನ್ನು ಕೂಡಾ ಮಾಡಿಕೊಂಡೆವು. ಇದಕ್ಕೋಸ್ಕರ ಕಾರ್ಯವಸ್ತು 457.8 ಮಿ.ಮೀ. ವ್ಯಾಸದಲ್ಲಿ ಹಿಡಿದಿಡಲಾಯಿತು. ಮೂಲ ಕಾಸ್ಟಿಂಗ್‌ನಲ್ಲಿ ಈ ವ್ಯಾಸವು 462 ಮಿ.ಮೀ. ಇದೆ.
2. ಈ 413 ಮಿ.ಮೀ. ವ್ಯಾಸದ ಸಂದರ್ಭವನ್ನು ಅವಲಂಬಿಸಿ, ಅಂದರೆ ಲೊಕೇಟ್ ಮಾಡಿ ಮತ್ತು ಕಾರ್ಯವಸ್ತುವಿನ 510 ಯ 530 ಈ ಫೇಸ್‌ನಲ್ಲಿ ಒರಗಿಸಿ ವಿರುದ್ಧ ಬದಿಯ ಎಲ್ಲ ಪ್ರಕ್ರಿಯೆಯನ್ನು ಪೂರ್ತಿ ಮಾಡಬೇಕು.
3. ಇದೇ 413 ಮಿ.ಮೀ. ವ್ಯಾಸದಲ್ಲಿ ಕಾರ್ಯವಸ್ತುವನ್ನು ಲೊಕೇಟ್ ಮಾಡಿ ಮತ್ತು 12 ರಿಬ್‌ಗಳಲ್ಲಿ ಒಂದು ರಿಬ್‌ನ ಅಂಗ್ಯುಲರ್ ಲೊಕೇಶನ್ ಓರಿಯೆಂಟೇಶನ್ ಮಾಡಿ 18 ಮಿ.ಮೀ. ವ್ಯಾಸದ 12 ರಂಧ್ರಗಳನ್ನು ಮಾಡಿದೆವು.
4. ಮುಂದಿನ ಎಲ್ಲ ಕೆಲಸಗಳನ್ನು 18 ಮಿ.ಮೀ. ವ್ಯಾಸವಿರುವ ಎರಡು ರಂಧ್ರಗಳಲ್ಲಿ ಕೆಂಪು ಬಣ್ಣದಲ್ಲಿ ತೋರಿಸಿದಂತೆ ಲೊಕೇಶನ್ ಮಾಡಲಾಯಿತು. (ಚಿತ್ರ ಕ್ರ. 3)
 

3_1  H x W: 0 x 
ಈ ಎಲ್ಲ ಕೆಲಸಗಳನ್ನು ಕಾರ್ಯವಸ್ತುವಿಗೆ 413 ಮಿ.ಮೀ. ವ್ಯಾಸದಲ್ಲಿ ಲೊಕೇಟ್ ಮಾಡಿ, 18 ಮಿ.ಮೀ. ವ್ಯಾಸದ ಒಂದು ರಂಧ್ರವನ್ನು ಬಳಸಿ ಓರಿಯೆಂಟೇಶನ್ ಮಾಡಬಹುದು. ಆದರೆ ಹೀಗೆ ಮಾಡಿದಲ್ಲಿ ಮುಂದಿನ ಅಡಚಣೆಗಳು ಉಂಟಾಗುವ ಸಾಧ್ಯತೆಯೂ ಇರುತ್ತದೆ.
 
ಎ. 413 ಮಿ.ಮೀ. ವ್ಯಾಸವಿರುವ ದೊಡ್ಡ ಲೊಕೇಟರ್ ತಯಾರಿಸಬೇಕಾಗಬಹುದು. ಇದರಿಂದಾಗಿ ಭಾರ ಮತ್ತು ಖರ್ಚು ಕೂಡಾ ಹೆಚ್ಚಾಗಬಹುದು.
ಬಿ. ಇದಕ್ಕಿಂತಲೂ ತುಂಬಾ ಮಹತ್ವದ ವಿಷಯವೆಂದರೆ, ಈ ಎಲ್ಲ ರೀತಿಯ ಫಿಕ್ಸ್ಚರ್‌ನ 413 ಮಿ.ಮೀ. ವ್ಯಾಸದಲ್ಲಿ ಆಗಾಗ ಕಾರ್ಯವಸ್ತುವನ್ನು ಲೊಕೇಟ್ ಮಾಡಿದ್ದರಿಂದ ಆ ವ್ಯಾಸವೂ ಹಾಳಾಗಬಹುದು. ಕಾರಣ ಈ ಜಾಗದಲ್ಲಿರುವ ಕಾರ್ಯವಸ್ತು ಅಲ್ಯುಮಿನಿಯಮ್‌ನಿಂದ ತಯಾರಿಸಲಾಗಿದೆ, ಎಂಬುದನ್ನು ಗಮನದಲ್ಲಿಡಬೇಕು. ವಿಶೇಷವಾಗಿ ಆಟೊಮೊಬೈಲ್ ಉದ್ಯಮದಲ್ಲಿ ಹೆಚ್ಚಾಗಿ ಪ್ರಮುಖವಾದ ಯಂತ್ರೋಪಕರಣಗಳು ಅಲ್ಯುಮಿನಿಯಮ್‌ನಿಂದಲೇ ತಯಾರಿಸಲಾಗಿರುತ್ತವೆ. ಇಂತಹ ಪ್ರತಿಯೊಂದು ಅಲ್ಯುಮಿನಿಯಮ್‌ನ ಕಾರ್ಯವಸ್ತುವಿಗೆ ಯಂತ್ರಣೆಯನ್ನು ಮಾಡುತ್ತಿರುವಾಗ ಮೇಲೆ ತಿಳಿಸಿರುವ ಅಂಶಗಳನ್ನು ಗಮನದಲ್ಲಿಡಬೇಕು.
 
ಸಿ. ಒಂದು ವೇಳೆ 413 ವ್ಯಾಸದಲ್ಲಿ ಲೊಕೇಶನ್ ಮಾಡಿದಲ್ಲಿ ಕಚ್ಚು ಮಾಡುವುದು ಸಾಧ್ಯವಿಲ್ಲ.
ಈ ಸ್ಥಿತಿಯಲ್ಲಿ S ಕಚ್ಚನ್ನು ಹೇಗೆ ಮಾಡುವುದು ಎಂಬುದರ ಕುರಿತು ವಿಚಾರ ಮಾಡಲಿದ್ದೇವೆ. ಈ ಕಚ್ಚು ವ್ಯಾಸದ ಒಳಗೆ ಇರುವುದರಿಂದ ಸಾಮಾನ್ಯವಾದ ಹಾರಿಝಾಂಟಲ್ ಮತ್ತು ವ್ಹರ್ಟಿಕಲ್ ಮಿಲಿಂಗ್ ಮಶಿನ್‌ನಲ್ಲಿ ತಯಾರಿಸುವುದು ಸಾಧ್ಯವಿರಲಿಲ್ಲ ಎಂಬ ಸಮಸ್ಯೆಯೇ ಪ್ರಕ್ರಿಯೆಯಲ್ಲಿ ಕಂಡುಬಂತು. ಈ ಸಮಸ್ಯೆಯನ್ನು ಪರಿಹರಿಸಲು ಒಂದು ಫಿಕ್ಸ್ಚರ್ ತಯಾರಿಸಿದೆವು.
 
 4_1  H x W: 0 x
 
 5_1  H x W: 0 x
 
ಈ ಕೆಲಸವನ್ನು ಮಾಡಲು ಮಶಿನ್‌ನ ಹೆಡ್ 413 ಮಿ.ಮೀ. ವ್ಯಾಸಕ್ಕಿಂತ ಕಡಿಮೆ ಮಾಡುವ ಆವಶ್ಯಕತೆ ಇತ್ತು. ಇಂತಹ ವ್ಯವಸ್ಥೆ ಇರುವ ಮಶಿನ್ ಕೂಡಾ ಉಪಲಬ್ಧವಿತ್ತು. ಇದರ ಹೊರತಾಗಿ ಮಿಲಿಂಗ್ ಅಟ್ಯಾಚ್‌ಮೆಂಟ್ ಬಳಸುವುದು ಅನಿವಾರ್ಯವಾಗಿತ್ತು. ಈ ಕಾರ್ಯವಸ್ತುವಿನ ಯಂತ್ರಣೆಯನ್ನು ಹೇಗೆ ಮಾಡಲಾಯಿತು ಎಂಬುದನ್ನು ಚಿತ್ರ ಕ್ರ. 4 ರಲ್ಲಿ ತೋರಿಸಲಾಗಿದೆ. ಚಿತ್ರ ಕ್ರ. 5 ರಲ್ಲಿ ಕಚ್ಚು ಮತ್ತು ಕಟರ್ ದೊಡ್ಡದಾಗಿ ಮಾಡಿ ತೋರಿಸಲಾಗಿದೆ. ಇದರಿಂದಾಗಿ ನಿಖರವಾಗಿ ಯಂತ್ರಣೆಯು ಹೇಗಾಗುತ್ತದೆ, ಎಂಬುದೂ ಗಮನಕ್ಕೆ ಬರುತ್ತದೆ.
ಕಚ್ಚಿನ ಉದ್ದ (62 ಮಿ.ಮೀ.) ಮಾಡಲು (X ಅಕ್ಷ) ಮಶಿನ್‌ನ ಬೆಡ್‌ನಲ್ಲಿರುವ ಸ್ಟಾಪರ್‌ನ್ನು ಬಳಸಲಾಗುತ್ತದೆ. ಕಚ್ಚಿನ ಆಳಕ್ಕೋಸ್ಕರ (Z ಅಕ್ಷ) ಡೈಲರ್‌ನಲ್ಲಿ ರೀಡಿಂಗ್ ಸೆಟ್ ಮಾಡಲಾಯಿತು. ಕಚ್ಚಿನ ಫೇಸ್‌ನ ದೂರಕ್ಕೋಸ್ಕರ 14 ಮಿ.ಮೀ. (Y ಅಕ್ಷ) ಮಶಿನ್‌ನ ಸ್ಟಾಪರ್ ಬಳಸಲಾಯಿತು.
 
6_1  H x W: 0 x
 
ಫಿಕ್ಸ್ಚರ್‌ನಲ್ಲಿ ಕಾರ್ಯವಸ್ತುವನ್ನು ಹೇಗೆ ಹಿಡಿದಿಡಲಾಗುತ್ತದೆ ಎಂಬುದನ್ನು ಚಿತ್ರ ಕ್ರ. 6 ರಲ್ಲಿ ಗಮನಿಸಬಹುದು. ಎರಡು ಕ್ಲ್ಯಾಂಪ್‌ಗಳ ಸಹಾಯದಿಂದ ಕಾರ್ಯವಸ್ತುವನ್ನು ದೃಢವಾಗಿ ಹಿಡಿದಿಡಲಾಗುತ್ತದೆ. ಕ್ಲ್ಯಾಂಪ್ ನಟ್ ಲೊಕೇಟಿಂಗ್ ಪಿನ್‌ನಲ್ಲಿ ದೃಢವಾಗಿ ಮಾಡಲಾಗಿದೆ. ಪಿನ್‌ಗೆ ಥ್ರೆಡ್‌ಗಳನ್ನು ಮಾಡಲಾಗಿದೆ. ಮೊದಲಾಗಿ ಮಹತ್ವದ ಅಂಶವೆಂದರೆ ಕಚ್ಚು X ಅಕ್ಷಕ್ಕೆ ಸಮಾನಾಂತರವಾಗಿ ಮಾಡಲಾಯಿತು. ಕೆಂಪು ಬಣ್ಣದ ರಂಧ್ರವು (ಚಿತ್ರ ಕ್ರ. 3) ಇರುವಲ್ಲಿ ಲೊಕೇಟಿಂಗ್ ಪಿನ್ ಅಳವಡಿಸಲಾಯಿತು. ನಿರ್ದೋಷವಾದ ಮಾಪನಕ್ಕೋಸ್ಕರ ಟ್ರಿಗ್ನಾಮೆಟ್ರಿಯ ಆಧಾರವನ್ನು ಪಡೆಯಬೇಕಾಗಬಹುದು.
 

7_1  H x W: 0 x
 
 
ಚಿತ್ರ ಕ್ರ. 7 ರಲ್ಲಿ ಫಿಕ್ಸ್ಚರ್ ತೋರಿಸಲಾಗಿದೆ. ಅದರಲ್ಲಿರುವ ಬೇರೆಬೇರೆ ಭಾಗಗಳ ಕೆಲಸವನ್ನು ನಾವೀಗ ನೋಡಲಿದ್ದೇವೆ.
 
1.ಬೇಸ್ ಪ್ಲೇಟ್ : ಫಿಕ್ಸ್ಚರ್ ಈ ಪ್ಲೇಟ್‌ನಲ್ಲಿಯೇ ಸಂಪೂರ್ಣವಾಗಿ ಅವಲಂಬಿಸಿರುತ್ತದೆ. ಈ ಪ್ಲೇಟ್‌ನಲ್ಲಿ U ಆಕಾರದ ಕಚ್ಚುಗಳನ್ನು ಫಿಕ್ಸ್ಚರ್‌ನ ಕ್ಲ್ಯಾಂಪಿಂಗ್‌ಗೋಸ್ಕರ ನೀಡಲಾಗಿದೆ. ಅದರಂತೆಯೇ ಟೆನನ್ ಅಳವಡಿಸಿರುವುದರಿಂದ ಕಚ್ಚಿಗೆ ಸಮಾನಾಂತರವಾಗಿ ಯಂತ್ರಣೆಯಾಗುತ್ತದೆ. ಈ ಫಿಕ್ಸ್ಚರ್‌ನ ಉದ್ದವು ತುಂಬಾ ಹೆಚ್ಚಾಗಿರುವುದರಿಂದ ಒಂದು ವೇಳೆ ಟೆನನ್ ಅಳವಡಿಸದೇ ಇದ್ದರೂ ಕಾರ್ಯವಸ್ತುವಿನಲ್ಲಿರುವ ಕಚ್ಚು ಹೆಚ್ಚೇನು ಓರೆಯಾಗುವುದಿಲ್ಲ. ಕಚ್ಚಿನ ಉದ್ದವು ಕೇವಲ 62 ಮಿ.ಮೀ. ಮತ್ತು ಫಿಕ್ಸ್ಚರ್‌ನ ಉದ್ದವು 850 ಮಿ.ಮೀ. ಇರುವುದೇ ಇದಕ್ಕೆ ಕಾರಣವಾಗಿದೆ.
 
2.ಕಾರ್ಯವಸ್ತುವಿನ ರೆಸ್ಟಿಂಗ್ ಪ್ಲೇಟ್ : ಈ ಎರಡು ನೆಟ್ಟಗಿರುವ ಪಟ್ಟಿಗಳು ಒಂದು ಸಮತಲದಲ್ಲಿ ಅಳವಡಿಸಲಾಗಿವೆ. ಈ ಎರಡು ಪಟ್ಟಿಗಳಲ್ಲಿ ಕಾರ್ಯವಸ್ತುವು ತಾಗಿ ನಿಲ್ಲುತ್ತದೆ ಮತ್ತು ಕ್ಲ್ಯಾಂಪ್‌ನಲ್ಲಿ ಹಿಡಿದಿಡಲಾಗುತ್ತದೆ. ಈ ಸಮತಲವು ಟೆನನ್‌ನ ಕಚ್ಚಿಗೆ ಸಮಾನಾಂತರವಾಗಿ ಇರಬೇಕು.
 
3.ಪೋರ್ಟ್ ಪ್ಲೇಟ್ : ಈ ಪಟ್ಟಿಯು ಕಾರ್ಯವಸ್ತುವು ಒರಗುವ ಪಟ್ಟಿಗೆ ಆಧಾರವನ್ನು ನೀಡಲು ಬಳಸಲಾಗುತ್ತದೆ. ಅದು ಸ್ಕ್ರೂ ಮತ್ತು ಡಾವೆಲ್‌ನ ಸಹಾಯದಿಂದ ಅಳವಡಿಸಲಾಗುತ್ತದೆ.
 
4.ಲೊಕೇಟಿಂಗ್ ಪಿನ್ : 18 ಮಿ.ಮೀ. ವ್ಯಾಸದ ಎರಡು ರಂಧ್ರಗಳಲ್ಲಿ ಲೊಕೇಶನ್ ಮಾಡಿರುವುದರಿಂದ ಕಚ್ಚಿನ ಅಳತೆಯು ನಿರಂತರವಾಗಿ ಸರಿಸಮಾನವಾಗಿ ಇರುತ್ತದೆ. ಈ ಫಿಕ್ಸ್ಚರ್‌ನಲ್ಲಿ ಲೊಕೇಟಿಂಗ್ ಪಿನ್‌ನ ಎರಡು ಕೆಲಸಗಳಿರುತ್ತವೆ.
 
 
ಎ. 18 ಮಿ.ಮೀ. ವ್ಯಾಸದಲ್ಲಿ ಕಾರ್ಯವಸ್ತುವು ಲೊಕೇಟ್ ಆಗುತ್ತದೆ.
ಬಿ. ಪಿನ್‌ನ ಮೇಲ್ಭಾಗದಲ್ಲಿ ಥ್ರೆಡಿಂಗ್ ನೀಡಿದ್ದರಿಂದ ಕಾರ್ಯವಸ್ತುವಿಗೆ ಕ್ಲ್ಯಾಂಪ್ ಮಾಡುವುದು ಸಾಧ್ಯವಿದೆ.
5. ಕ್ಲ್ಯಾಂಪ್: ಎರಡು ಕ್ಲ್ಯಾಂಪ್‌ಗಳ ಸಹಾಯದಿಂದ ಕಾರ್ಯವಸ್ತುವನ್ನು ದೃಢವಾಗಿ ಹಿಡಿಯಲಾಗುತ್ತದೆ. ಇದರಿಂದಾಗಿ ಯಂತ್ರಣೆಯನ್ನು ಮಾಡುವಾಗ ಕಾರ್ಯವಸ್ತು ಅಲುಗಾಡುವುದಿಲ್ಲ.
 
6. ರಿಬ್: ಎರಡು ವ್ಹರ್ಟಿಕಲ್ ಕಾರ್ಯವಸ್ತುಗಳಿಗೆ ಒರಗಿರುವ ಪಟ್ಟಿಗಳಿಗೆ ಆಧಾರ ನೀಡುವ ಕೆಲಸವನ್ನು ರಿಬ್ ಮಾಡುತ್ತದೆ ಮತ್ತು ಅದರ ದೃಢತೆಯನ್ನೂ ಹೆಚ್ಚಿಸುತ್ತದೆ.
 
ಮೇಲೆ ತಿಳಿಸಿದಂತೆ ತಯಾರಿಸಿರುವ ಫಿಕ್ಸ್ಚರ್ ವೆಲ್ಡಿಂಗ್ ಮಾಡಿಯೂ ತಯಾರಿಸಬಹುದು. ಆದರೆ ವೆಲ್ಡಿಂಗ್ ಮಾಡುವಾಗ ಉಂಟಾಗುವ ಇಂಟರ್ನಲ್ ಸ್ಟ್ರೆಸ್‌ಗಳಿಂದಾಗಿ ಫಿಕ್ಸ್ಚರ್‌ಗಳ ಆಕಾರವು ಕಾಲಾಂತರದಲ್ಲಿ ಹಾಳಾಗುವ ಸಾಧ್ಯತೆಯು ಇರುತ್ತದೆ. ಇದರಿಂದಾಗಿ ಕಾರ್ಯವಸ್ತುವಿನ ಗುಣಮಟ್ಟದ ಕುರಿತಾಗಿ ಯಾವುದೇ ಖಾತರಿಯನ್ನು ನೀಡಲಾಗುವುದಿಲ್ಲ. ವೆಲ್ಡಿಂಗ್ ಮಾಡುವಾಗ ಉಂಟಾಗುವ ಇಂಟರ್ನಲ್ ಸ್ಟ್ರೆಸ್ ತೆಗೆದು ಹಾಕಲು ಸ್ಟ್ರೆಸ್ ರಿಲಿವಿಂಗ್ ಮಾಡಬೇಕಾಗುತ್ತದೆ. ಇದರಿಂದಾಗಿ ಮೇಲೆ ತಿಳಿಸಿರುವ ದೋಷವು ಉದ್ಭವಿಸುವುದಿಲ್ಲ. ಆದರೆ ಒಂದು ವೇಳೆ ಈ ಸ್ಟ್ರೆಸ್ ರಿಲಿವಿಂಗ್ ಯೋಗ್ಯವಾಗಿ ಆಗದೇ ಇದ್ದಲ್ಲಿ ಫಿಕ್ಸ್ಚರ್‌ನ ನಿಖರತೆಯು ಸರಿಯಾಗುವುದಿಲ್ಲ. ಇದರಿಂದಾಗಿ ಯಾವ ಕಾರಖಾನೆಯಲ್ಲಿ ಇಂತಹ ಸ್ಟೆಸ್ ರಿಲಿವ್ಹಿಂಗ್ ಪ್ರಕ್ರಿಯೆಯು ಇಲ್ಲವೋ, ಅಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ವೆಲ್ಡಿಂಗ್ ಮಾಡಿ ಫಿಕ್ಸ್ಚರ್ ತಯಾರಿಸುವುದಿಲ್ಲ.
 
ಈ ಫಿಕ್ಸ್ಚರ್‌ನ ಡಿಝೈನ್ ಮತ್ತು ಮ್ಯಾನಿಫ್ಯಾಕ್ಚರಿಂಗ್ ಪುಣೆಯಲ್ಲಿರುವ ನಿರ್ಮಲ್ ಇಂಜಿನಿಯರಿಂಗ್‌ನ ಅವಿನಾಶ ದೇಶಪಾಂಡೆ (ಮೊಬೈಲ್ : 9890622855) ಇವರ ಸಹಾಯದಿಂದ ಲಭಿಸಿದೆ. ಅವರು ಈ ಫಿಕ್ಸ್ಚರ್ ಒಂದು ಹೆಸರಾಂತ ಸರಕಾರದ ಕಂಪನಿಗೋಸ್ಕರ ತಯಾರಿಸಿದ್ದಾರೆ.
 
ಮುಂದಿನ ಲೇಖನದಲ್ಲಿ ಡ್ರಿಲಿಂಗ್ ಫಿಕ್ಸ್ಚರ್‌ನ ಕುರಿತು ವಿವರಗಳನ್ನು ಪಡೆಯೋಣ. ಈ ವಿಧದ ಫಿಕ್ಸ್ಚರ್‌ನ ಬಳಕೆಯು ತುಂಬಾ ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತದೆ ಮತ್ತು ಅನೇಕ ವಿಧದ ಫಿಕ್ಸ್ಚರ್‌ಗಳ ಬಳಕೆಯನ್ನು ಮಾಡಲಾಗುತ್ತದೆ. ಅದಕ್ಕೋಸ್ಕರವೇ ಇದರ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳುವುದೂ ತುಂಬಾ ಉಪಯುಕ್ತವಾಗಿದೆ.
 
 
 
ಅಜಿತ್ ದೇಶಪಾಂಡೆ
ಅತಿಥಿ ಪ್ರಾಧ್ಯಾಪಕರು, ARI
 9011018388
ajitdeshpande21@gmail.com
ಅಜಿತ ದೇಶಪಾಂಡೆ ಇವರು ಜಿಗ್ಸ್ ಮತ್ತು ಫಿಕ್ಸ್ಚರ್ ಕ್ಷೇತ್ರದಲ್ಲಿ ಸುಮಾರು 36 ವರ್ಷಕ್ಕಿಂತಲೂ ಹೆಚ್ಚು ಅನುಭವವನ್ನು ಹೊಂದಿದ್ದಾರೆ. ಇವರು ಕಿರ್ಲೋಸ್ಕರ್, ಗ್ರೀವ್ಜ್ ಲೊಂಬಾರ್ಡಿನಿ ಲಿ., ಟಾಟಾ ಮೋಟರ್ಸ್ ಇಂತಹ ವಿವಿಧ ಕಂಪನಿಗಳಲ್ಲಿ ಬೇರೆ ಬೇರೆ ಅಧಿಕಾರಸ್ಥಾನಗಳಲ್ಲಿ ಸೇವೆಯನ್ನು ನಿರ್ವಹಿಸಿದ್ದಾರೆ.
 
 
Powered By Sangraha 9.0